ಸಾಮಾನ್ಯವಾಗಿ ನಂಜನಗೂಡು ಬಾಳೆಹಣ್ಣನ್ನು ನಂಜನಗೂಡಿನ ರಸಬಾಳೆಹಣ್ಣು ಎಂದು ಕರೆಯುತ್ತಾರೆ. ಭಾರತದ, ಕರ್ನಾಟಕ ರಾಜ್ಯದ, ಮೈಸೂರು ಜಿಲ್ಲೆ ಮತ್ತು ಚಾಮರಾಜನಗರ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಈ ಹಣ್ಣು ಅನನ್ಯ ರುಚಿ ಮತ್ತು ಸುವಾಸನೆಯನ್ನು ಹೊಂದಿದೆ. ಇದು ನಂಜನಗೂಡು ಸಮೀಪದಲ್ಲಿರುವ ದೇವರಸನಹಳ್ಳಿ ಗ್ರಾಮದಿಂದ ಬಂದ ಬಾಳೆ ಹಣ್ಣಿನ ಜನಪ್ರಿಯ ತಳಿಯಾಗಿದೆ. ನಂಜನಗೂಡು ಬಾಳೆಗೆ ಭೌಗೋಳಿಕ ಸೂಚಕ ಟ್ಯಾಗ್ ಸಂಖ್ಯೆ ೨೯ಅನ್ನು ನೀಡಲಾಗಿದೆ. ಈ ಟ್ಯಾಗ್ ಬಾಳೆಹಣ್ಣಿನ ವಿಶಿಷ್ಟ ಗುರುತನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸಹಾಯ ಮಾಡುತ್ತದೆ. ಕಯ್ಯಾರ ಕಿಞ್ಞಣ್ಣ ರೈ ಅವರ ಹಣ್ಣು ಮಾರುವವನ ಹಾಡಿನ ಮೂಲಕ ಇದು ಕನ್ನಡ ಸಾಹಿತ್ಯ ಲೋಕದಲ್ಲೂ ಪ್ರಸಿದ್ದವಾಗಿದೆ. == ಕೃಷಿ == ನಂಜನಗೂಡು ರಸಬಾಳೆ ಕೃಷಿಗೆ ನಿರ್ದಿಷ್ಟವಾದ ಮಣ್ಣಿನ ಪರಿಸ್ಥಿತಿಗಳು ಮತ್ತು ಹವಾಮಾನದ ಅಗತ್ಯವಿರುತ್ತದೆ, ಇದು ನಂಜನಗೂಡು ಸಮೀಪದಲ್ಲಿರುವ ದೇವರಸನಹಳ್ಳಿಯಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಪ್ರದೇಶದ ಸಾಂಪ್ರದಾಯಿಕ ಕೃಷಿ ಪದ್ಧತಿಗಳು ಮತ್ತು ನೈಸರ್ಗಿಕ ಪರಿಸರವು ಬಾಳೆಹಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಕಪಿಲಾ ನದಿಯ ತಟದಲ್ಲಿ ಸ್ವಾಭಾವಿಕವಾಗಿ ರಚನೆಗೂಂಡ ಕಪ್ಪು ಲವಣಯುಕ್ತ ಮೆಕ್ಕಲು ಮಣ್ಣೇ ಬೇಕು. ಸಾವಯವ ಕೃಷಿಯ ವಿಶಿಷ್ಟ ವಿಧಾನದಲ್ಲಿ ಬೆಳೆಸಿದರೆ ಹಣ್ಣು ವಿಶಿಷ್ಟ ರುಚಿ ಮತ್ತು ಸುವಾಸನೆಯನ್ನು ಹೊಂದಿರುತ್ತದೆ. ಇತರ ಪ್ರದೇಶದಲ್ಲಿ ಬೆಳೆದ ಹಣ್ಣು ಗಟ್ಟಿಯಾಗಿರುತ್ತದಲ್ಲದೆ ಸುವಾಸನೆಯನ್ನು ಕಳೆದುಕೂಂಡಿರುತ್ತದೆ. ಈ ರುಚಿ ಹಾಗು ಸುವಾಸನೆಯ ಗುಟ್ಟು ಅದರ ಜೀನ್ ಗಳಲ್ಲಿವೆ ಎಂಬುದು ತಜ್ಞರ ಮತ. . == ಮಾರುಕಟ್ಟೆ ಮತ್ತು ಲಭ್ಯತೆ == ಇದನ್ನು ಸಾಂಪ್ರದಾಯಿಕ ಹಬ್ಬಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈ ಬಾಳೆಹಣ್ಣು ಸ್ಥಳೀಯ ರೈತರಿಗೆ ಗಮನಾರ್ಹ ಆರ್ಥಿಕ ಲಾಭವನ್ನು ತಂದು ಕೂಡುತ್ತದೆ. ಜಿಐ ಟ್ಯಾಗ್ ಬಾಳೆಹಣ್ಣಿನ ಸತ್ಯಾಸತ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹಣ್ಣು ಗಾತ್ರದಲ್ಲಿ ಚಿಕ್ಕಾದಾಗಿಯು ಮತ್ತು ತಿನ್ನಲು ಬೆಣ್ಣೆಯಷ್ಟು ಮೆತ್ತಗಿರುತ್ತದೆ. ಸಾಮಾನ್ಯವಾಗಿ ಇದನ್ನ ಸಿಪ್ಪೆಸಮೇತ ತಿನ್ನುತ್ತಾರೆ. ಅನ್ಯಪ್ರದೇಶಗಳಲ್ಲಿ ಬೆಳೆಯಲು ಆಗದ ಕಾರಣ ಇದರ ಲಭ್ಯತೆಯು ಕಡಿಮೆ ಹಾಗಗಿ ಇದಕ್ಕೆ ಒಳ್ಳೆ ಬೇಡಿಕೆ ಇದೆ.ಇತ್ತೀಚಿಗೆ ರಸಾಯನಿಕ ಗೊಬ್ಬರಗಳ ಅತೀ ಬಳಕೆಯಿಂದಾಗಿ ಅದರ ರುಚಿ, ಆಕಾರ ಮತ್ತು ಸುವಾಸನೆ ಬದಲಾಗುತ್ತಿದೆ. == ಅಳತೆ == ನಂಜನಗೂಡು ಬಾಳೆಹಣ್ಣಿನ ಘಾತ್ರ ಅನ್ಯ ಬಾಳೇಹಣ್ಣುಗಳಿಗಿಂತಲೂ ಚಿಕ್ಕದು . ಇದು ೫-೮ . ಉದ್ದವಿದ್ದು, ಹಣ್ಣಿನ ಮಧ್ಯದ ಕೊಳವಿ ಭಾಗದ ವ್ಯಾಸ ೨-೩ . ಇರುತ್ತದೆ. ಇದರ ಸಿಪ್ಪೆ ತೆಳುವಾಗಿರುತ್ತದೆ. ಸಾವಯವ ನಂಜನಗೂಡು ಬಾಳೆಹಣ್ಣು ಚನ್ನಾಗಿ ಕಳೆತಾಗ ಅದರ ಸಿಪ್ಪೆಯನ್ನು ಹಣ್ಣಿನೊಂದಿಗೆ , ಇಲ್ಲವೆ ಸಿಪ್ಪೆಯನ್ನು ಪ್ರತ್ಯೇಕವಾಗಿ (ಹಸಿಯಾಗಿ ಇಲ್ಲವೆ ತರಕಾರಿಯ ಪದಾರ್ತದಂತೆ)ತಿನ್ನುವುದೂ ಉಂಟು. == ಭೌಗೋಳಿಕ ಸೂಚನೆ == ಕರ್ನಾಟಕ ಸರ್ಕಾರದ ತೋಟಗಾರಿಕ ಇಲಾಖೆ ನಂಜನಗೂಡು ಬಾಳೆಹಣ್ಣಿನ ನೋಂದಣಿ ಗೂಡ್ಸ್ ಆಕ್ಟ್, ೧೯೯೯ ಭೌಗೋಳಿಕ ಲಕ್ಷಣಗಳ (ಭೌಗೋಳಿಕ ಕುರುಹು) ಅಡಿಯಲ್ಲಿ, ಪೆಟೆಂಟ್ ಗಳಿಸಿತು. ಡಿಸೈನ್ಸ್ ನಿಯಂತ್ರಕ ಜನರಲ್ ಮತ್ತು ಟ್ರೇಡ್ಮಾರ್ಕ್ ಕಚೇರಿಯು ಮೈಸೂರು ರೈತರಿಗೆ ನಂಜನಗೂಡು ಬಾಳೆಹಣ್ಣಿನ ಮತ್ತು ಅದರ ಉತ್ಪನ್ನಗಳ ಬ್ರಾಂಡ್ ಹಕ್ಕು ನೀಡಿದೆ. ಇದಕ್ಕೆ ಭೌಗೋಳಿಕ ಲಕ್ಷಣದ ನೊಂದಣಿ ೨೦೦೫ ರಲ್ಲಿ ದೊರೆಯಿತು. == ಇವನ್ನೂ ನೋಡಿ == ಭೌಗೋಳಿಕ ಕುರುಹು ಮೈಸೂರು ನಂಜನಗೂಡು ಚಾಮರಾಜನಗರ == ಬಾಹ್ಯ ಕೊಂಡಿಗಳು == ಕರ್ನಾಟಕಕ್ಕೆ ಸಿಕ್ಕಿದ ಇನ್ನಿತರ ಗಳು ಭಾರತ ಸರ್ಕಾರದ 2013-08-26 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==